ಮತ್ತೆ ಪೆಟ್ರೋಲ್, ಡೀಸೆಲ್‌ ತುಟ್ಟಿ

ಲೋಕಬಂಧು ನ್ಯೂಸ್ | ನವದೆಹಲಿ, ಮೇ 23
ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿದ್ದು ಕೇವಲ 10 ದಿನದಲ್ಲಿ 3 ಬಾರಿ ಏರಿಕೆಯಾಗಿ ಲೀ.ಗೆ 5 ರೂ.ನಷ್ಟು ಹೆಚ್ಚಾಗಿದೆ.
ಮಧ್ಯಪ್ರಾಚ್ಯ ದೇಶಗಳ ಸಂಘರ್ಷಕ್ಕೆ ಸಂಬಂಧಿಸಿದಂತೆ ಇಂಧನ ವೆಚ್ಚ ದುಬಾರಿಯಾಗುತ್ತಿದ್ದು, ಅದರಿಂದ ಗ್ರಾಹಕರು ಪರದಾಡುವಂತಾಗಿದೆ. ಇಂಧನ ಬೆಲೆ ಏರಿಕೆಯಿಂದ ಜನರು ಬಹಳ ಸಂಕಷ್ಟಕ್ಕೆ ಸಿಲುಕಿದ್ದಾರೆ.


ಶನಿವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಮತ್ತೆ ಹೆಚ್ಚಿಸಲಾಯಿತು. ಇದು 10 ದಿನಗಳಿಗಿಂತ ಕಡಿಮೆ ಅವಧಿಯಲ್ಲಿ ಮೂರನೇ ಬಾರಿ ಹೆಚ್ಚಳವಾಗಿದೆ.


ಪೆಟ್ರೋಲ್ ಬೆಲೆ 87 ಪೈಸೆ ಏರಿಕೆಯಾಗಿದ್ದು, ಲೀಟರ್‌ಗೆ 99.51 ರೂ. ತಲುಪಿದೆ. ದೆಹಲಿಯಲ್ಲಿ 98.64 ರೂ.ನಷ್ಟು ಏರಿಕೆ ಕಂಡಿದೆ. ಡೀಸೆಲ್ ದರ 91 ಪೈಸೆ ಏರಿಕೆಯಾಗಿದ್ದು, ಲೀಟರ್‌ಗೆ 92.49 ರೂ.ಗೆ ತಲುಪಿದೆ. ಹಾಗೆಯೇ ಮೇ 15ರಂದು ಲೀಟರ್‌ಗೆ 3 ರೂ. ಹೆಚ್ಚಳ ಮತ್ತು ಮೇ 19 ರಂದು 90 ಪೈಸೆ ಹೆಚ್ಚಳ ಕಂಡಿತ್ತು. ಹೊಸ ಹೆಚ್ಚಳದೊಂದಿಗೆ ಇಂದು ಇಂಧನ ಬೆಲೆಗಳು ಒಟ್ಟು ಲೀಟರ್‌ಗೆ ಸುಮಾರು 5 ರೂ.ಗಳಷ್ಟು ಏರಿಕೆಯಾಗಿದೆ.


ಸಿಎನ್‌ಜಿ ಬೆಲೆ ಏರಿಕೆ
ದೆಹಲಿಯಲ್ಲಿ ಎನ್‌ಸಿಆರ್‌ನಾದ್ಯಂತ ಸಿಎನ್‌ಜಿ ಬೆಲೆಯನ್ನು ಕೆಜಿಗೆ 1 ರೂ. ಹೆಚ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.


ಇತ್ತೀಚಿನ ದರ ಪರಿಷ್ಕರಣೆ ನಂತರ ದೆಹಲಿಯಲ್ಲಿ ಸಿಎನ್‌ಜಿ ಬೆಲೆ ಕೆಜಿಗೆ 81.09 ರೂ.ಗೆ ಏರಿದೆ. ನೋಯ್ಡಾ, ಗಾಜಿಯಾಬಾದ್ ಮತ್ತು ಗ್ರೇಟರ್ ನೋಯ್ಡಾದಲ್ಲಿ ಈಗ ಕೆಜಿಗೆ 89.70 ರೂ.ಗಳಾಗಿದ್ದು, ಗುರುಗ್ರಾಮ್‌ನ ಗ್ರಾಹಕರು ಕೆಜಿಗೆ 86.12 ರೂ. ಮತ್ತು ಅಜ್ಮೀರ್‌ನಲ್ಲಿ 90.44 ರೂ. ಪಾವತಿಸಬೇಕಾಗುತ್ತದೆ.


ಮೇ 15ರಂದು ಕೆಜಿಗೆ 2 ರೂ. ಹೆಚ್ಚಳ ಮತ್ತು ಮೇ 18ರಂದು ಮತ್ತೊಂದು ರೂ. ಹೆಚ್ಚಳದ ಹಿನ್ನೆಲೆಯಲ್ಲಿ ಇತ್ತೀಚಿನ ಏರಿಕೆ ಕಂಡುಬಂದಿದ್ದು, ಎರಡು ವಾರಗಳಲ್ಲಿ ಸಿಎನ್‌ಜಿ ಬೆಲೆಯಲ್ಲಿ ಒಟ್ಟು ಏರಿಕೆ ಪ್ರತಿ ಕೆಜಿಗೆ 4 ರೂ. ಏರಿಕೆಯಾಗಿದೆ.


ಮೇ 15ರಿಂದ ಮೂರು ಪರಿಷ್ಕರಣೆಗಳ ಮೂಲಕ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಲೀಟರ್‌ಗೆ ಸುಮಾರು 5 ರೂ.ಗಳಷ್ಟು ಏರಿಕೆಯಾಗಿದೆ.