ಶನೈಶ್ಚರ ದೇವರಿಗೆ ವಿಶೇಷ ಪೂಜೆ

ಲೋಕಬಂಧು ನ್ಯೂಸ್ | ಉಡುಪಿ, ಮೇ 16
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಶನಿವಾರ ಬನ್ನಂಜೆ ಶನಿ ಕ್ಷೇತ್ರದಲ್ಲಿ ವೈಶಾಖ ಅಮಾವಾಸ್ಯೆ ಪುಣ್ಯದಿನ ಅಂಗವಾಗಿ ನಡೆದ ಶ್ರೀ ಶನಿ ಜಯಂತಿ ಮಹೋತ್ಸವದಲ್ಲಿ ಭಾಗವಹಿಸಿ, ಶ್ರೀ ಶನಿದೇವರ ದಿವ್ಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಭಕ್ತರ ಕಷ್ಟಗಳನ್ನು ನಿವಾರಿಸಿ ನ್ಯಾಯದ ಮಾರ್ಗದಲ್ಲಿ ನಡೆಯುವಂತೆ ಪ್ರೇರೇಪಿಸುವ ಶ್ರೀ ಶನಿದೇವರ ಆಶೀರ್ವಾದ ನಾಡಿನ ಪ್ರತಿಯೊಂದು ಮನೆ ಮನೆಗೂ ಲಭಿಸಲಿ. ರಾಜ್ಯದಲ್ಲಿ ಸುಖ, ಶಾಂತಿ, ಸಮೃದ್ಧಿ ಸದಾ ನೆಲೆಸಿರಲಿ ಎಂದು ಪ್ರಾರ್ಥಿಸಿದರು.