ಸುಹಾಸಂ ಹರ್ಷ ವರ್ಷ

ಲೋಕಬಂಧು ನ್ಯೂಸ್ | ಉಡುಪಿ, ಮೇ 23
ಸುಹಾಸಂ ವತಿಯಿಂದ ಅಂಬಲಪಾಡಿ ಬೈಪಾಸ್ ಬಳಿಯ ಹೋಟೆಲ್ ಕಾರ್ತಿಕ್ ಎಸ್ಟೇಟ್‌ ಮಧುವನ ಸಭಾಂಗಣದಲ್ಲಿ ಹರ್ಷ ವರ್ಷ ಹಾಸ್ಯಹಬ್ಬ ಕಾರ್ಯಕ್ರಮ ನಡೆಯಿತು.
ಗಂಗಾವತಿ ಪ್ರಾಣೇಶ್ ಉತ್ತರ ಕರ್ನಾಟಕ ಸೊಗಡಿನ ಶುದ್ಧ ಹಾಸ್ಯದ ಮಳೆ ಸುರಿಸಿ ಸಭಿಕರನ್ನು ನಗೆಗಡಲಲ್ಲಿ ತೇಲಿಸಿದರು.


ಬಸವರಾಜ ಮಹಾಮನಿ, ಬಸವರಾಜ ಬೆಣ್ಣಿ ಹಳ್ಳಿ ಬದುಕು, ಸಂಬಂಧ, ಆಧುನಿಕತೆಯ ಗೊಂದಲಗಳಿಗೆ ಹಾಸ್ಯ ಲೇಪನ ನೀಡಿ ಜನರ ಮನ ಮುಟ್ಟುವಂತೆ ಸೊಗಸಾಗಿ ಪ್ರಸ್ತುತಪಡಿಸಿದರು.


ಹೋಟೆಲ್ ಮಾಲೀಕ ಹಾಗೂ ಉದ್ಯಮಿ ಹರಿಯಪ್ಪ ಕೋಟ್ಯಾನ್, ರಾಜ್ಯಪಾಲರಿಂದ ಗೌರವ ಸ್ವೀಕರಿಸಿದ ಉದ್ಯಮಿ ವಿಶ್ವನಾಥ ಶೆಣೈ ಅವರನ್ನು ಗೌರವಿಸಲಾಯಿತು.


ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಉಪಸ್ಥಿತರಿದ್ದರು.


ಸುಹಾಸಂ ನೂತನ ಅಧ್ಯಕ್ಷೆ ಸಂಧ್ಯಾ ಶೆಣೈ ಅಧ್ಯಕ್ಷತೆ ವಹಿಸಿ, ಸಭಿಕರಿಗೆ ಕಚಗುಳಿಯಿಡುವ ತಿಳಿ ಹಾಸ್ಯದ ಪ್ರಾಸ್ತಾವಿಕ ಮಾತುಗಳನ್ನಾಡಿದರು. 


ನಿರ್ಮಲಾ ನಾಯಕ್ ಹಾಗೂ ಭಾಗ್ಯಲಕ್ಷ್ಮಿ ಉಪ್ಪೂರು ಪ್ರಾರ್ಥಿಸಿದರು. ಸುಹಾಸಂ ಕಾರ್ಯದರ್ಶಿ ಮುರಳೀಧರ್‌ ಕೆ. ಸ್ವಾಗತಿಸಿ, ಶಿಲ್ಪಾ ಜೋಶಿ ಕಾರ್ಯಕ್ರಮ ನಿರೂಪಿಸಿದರು.


ಕಿಕ್ಕಿರಿದ್ದು ಸೇರಿದ್ದ ಜನರು ಎರಡೂವರೆ ಗಂಟೆಗಳ ಕಾಲ ಹಾಸ್ಯ ರಸಾಯನ ಸವಿದರು.