ಲೋಕಬಂಧು ನ್ಯೂಸ್ ಉಡುಪಿ, ಮೇ 6
ರಂಗ ಶಿಬಿರಗಳು ಮಕ್ಕಳ ಕ್ರಿಯಾಶೀಲತೆಯನ್ನು ಹೆಚ್ಚಿಸುತ್ತದೆ. ಪ್ರಸಕ್ತ ದಿನಗಳಲ್ಲಿ ಶಿಕ್ಷಣದ ಜೊತೆ ಶಿಕ್ಷಣೇತರ ಚಟುವಟಿಕೆಗಳು ಅತೀ ಮುಖ್ಯ ಎಂದು ರಂಗಕರ್ಮಿ ಪ್ರದೀಪಚಂದ್ರ ಕುತ್ಪಾಡಿ ಅಭಿಪ್ರಾಯ ವ್ಯಕ್ತಪಡಿಸಿದರು.ಕೊಡವೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಸುಮನಸಾ ಕೊಡವೂರು ಹಮ್ಮಿಕೊಂಡ ರಂಗಶಿಬಿರ 'ಅಟ್ಟಾಮುಟ್ಟ' ಉದ್ಘಾಟಿಸಿ ಮಾತನಾಡಿದರು.
ಶಿಬಿರ ಮಕ್ಕಳ ಶೈಕ್ಷಣಿಕ ಸಾಮರ್ಥ್ಯ ವೃದ್ಧಿಗೆ ಸಹಕಾರಿಯಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಸುಮನಸಾ ತಂಡದ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು, ಗೌರವಾಧ್ಯಕ್ಷ ಎಂ.ಎಸ್. ಭಟ್, ಸಂಚಾಲಕ ಭಾಸ್ಕರ ಪಾಲನ್, ಶಿಬಿರದ ನಿರ್ದೇಶಕ ಚರಿತ್ ಸುವರ್ಣ, ಮಂಗಳೂರು, ಎಸ್.ಡಿ.ಎಂ. ಸಿ. ಅಧ್ಯಕ್ಷ ರಾಧಾಕೃಷ್ಣ ಪೈ, ಕೊಡವೂರು ಶಾಲೆಯ ಮುಖ್ಯ ಶಿಕ್ಷಕಿ ಶೋಭಾ, ಸಹಶಿಕ್ಷಕಿ ನಿಶ್ಮಿತಾ, ಶಿಬಿರದ ಸಂಚಾಲಕಿ ರಾಧಿಕಾ ದಿವಾಕರ್ ಉಪಸ್ಥಿತರಿದ್ದರು.
ದಿವಾಕರ್ ಕಟೀಲ್ ಸ್ವಾಗತಿಸಿ, ವಂದಿಸಿದರು. ಯೋಗೀಶ್ ಕೊಳಲಗಿರಿ ಕಾರ್ಯಕ್ರಮ ನಿರೂಪಿಸಿದರು.
ಶಿಬಿರ 12 ದಿನಗಳ ಕಾಲ ನಡೆಯಲಿದ್ದು, 40 ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ.