ಲೋಕಬಂಧು ನ್ಯೂಸ್ ಪಡುಬಿದ್ರಿ, ಮೇ 2
ಶ್ರೀ ಮಹಾರುದ್ರ ದೇವರನ್ನು ಅನುದಿನವೂ ಭಜಿಸಿದಲ್ಲಿ ನಮ್ಮ ಮನದಿಂಗಿತಗಳೆಲ್ಲವೂ ಫಲಿಸಿ ಇಷ್ಟಾರ್ಥ ಸಿದ್ಧಿಯಾಗುತ್ತದೆ. ಈ ನಿಟ್ಟಿನಲ್ಲಿ ಭಗವಂತನ ನಾಮಸ್ಮರಣೆ ಅನವರತವೂ ನಡೆಯಲಿ ಎಂದು ಅದಮಾರು ಮಠದ ಕಿರಿಯ ಯತಿ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಹೇಳಿದರು.ಸುಮಾರು 33 ಕೋ. ರೂ. ವೆಚ್ಚದಲ್ಲಿ ಸಂಪೂರ್ಣ ಶಿಲಾಮಯಗೊಂಡು ಪುನರ್ ನಿರ್ಮಾಣಗೊಂಡಿರುವ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ನೂತನ ಗರ್ಭಗುಡಿಯಲ್ಲಿ ಬುಧವಾರ ಶ್ರೀ ದೇವಳದದ ತಂತ್ರಿಗಳಾದ ಕಂಬಳಕಟ್ಟ ರಾಧಾಕೃಷ್ಣ ಉಪಾಧ್ಯಾಯ ಅವರ ನೇತೃತ್ವದಲ್ಲಿ ಶ್ರೀ ಮಹಾಲಿಂಗೇಶ್ವರ ದೇವರ ಪ್ರತಿಷ್ಠಾ ಕಾರ್ಯಗಳು ಸಂಪನ್ನಗೊಂಡು ಬಳಿಕ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.
ದೇವಳ ನವೀಕರಣ ಕಾರ್ಯಗಳ ಪೂರ್ವದಲ್ಲಿ ಬಾಲಾಲಯದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಶ್ರೀ ಮಹಾರುದ್ರ ದೇವರ ಬಲಿಮೂರ್ತಿ ಹಾಗೂ ಕಲಾ ಸಾನ್ನಿಧ್ಯಗಳ ಕಲಶವನ್ನು ಮಂಗಳವಾರ ಸಂಜೆ ವೈಭವದ ಮೆರವಣಿಗೆಯಲ್ಲಿ ದೇವಸ್ಥಾನಕ್ಕೆ ತರಲಾಗಿತ್ತು. ಬುಧವಾರ ಪೂರ್ವಾಹ್ನ ಅವುಗಳ ಸಮಕ್ಷಮ ಪ್ರತಿಷ್ಠಾ ಯಾಗ ನೆರವೇರಿಸಲಾಯಿತು.
ಮತ್ತೆ ಅವುಗಳನ್ನು ಗರ್ಭಗುಡಿಯೊಳಕ್ಕೆ ಕೊಂಡೊಯ್ದ ತಂತ್ರಿಗಳು ಶ್ರೀ ಮಹಾಲಿಂಗೇಶ್ವರ ದೇವರಿಗೆ ಅಷ್ಟಬಂಧ ಲೇಪನಾ ಕಾರ್ಯ ನೆರವೇರಿಸಿದರು.
ಅನಂತರ ಅಭಿಷೇಕ ಮಾಡಿ, ಶ್ರೀ ದೇವರಿಗೆ ಪ್ರಸನ್ನ ಪೂಜೆ ಮಾಡಿದರು.
ಲಲಲಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ.ಕೆ. ಪ್ರಕಾಶ್ ಶೆಟ್ಟಿ, ಆನುವಂಶಿಕ ಮೊಕೇಸರರಾದ ಪಡುಬಿದ್ರಿ ಬೀಡು ರತ್ನಾಕರ ರಾಜ ಅರಸು ಕಿನ್ಯಕ್ಕ ಬಲ್ಲಾಳರು, ಪಡುಬಿದ್ರಿ ಪೇಟೆಮನೆ ಭವಾನಿಶಂಕರ ಹೆಗ್ಡೆ, ಕೊರ್ನಾಯ ಶ್ರೀಪತಿ ರಾವ್, ಶ್ರೀ ದೇವಳದ ಕಾರ್ಯನಿರ್ವಹಣಾಧಿಕಾರಿ ಕೆ. ರಾಜಗೋಪಾಲ ಉಪಾಧ್ಯಾಯ, ಅರ್ಚಕರಾದ ಎಚ್. ಪದ್ಮನಾಭ ಭಟ್, ವೈ. ಗುರುರಾಜ ಭಟ್, ಕೃಷ್ಣಾಪುರ ಶಾಖಾ ಮಠದ ಶ್ರೀನಿವಾಸ ಉಪಾಧ್ಯಾಯ, ಆಶಾ ಪ್ರಕಾಶ್ ಶೆಟ್ಟಿ,ಕೊರ್ನಾಯ ಪದ್ಮನಾಭ ರಾವ್, ಶಕುಂತಳಾ ಬಿ. ಹೆಗ್ಡೆ, ಶೇಖರ ಶೆಟ್ಟಿ, ಗುತ್ತಿನಾರ್ ಕೃಷ್ಣ ಶೆಟ್ಟಿ, ಸದಾಶಿವ ಆಚಾರ್ಯ, ಪಿ. ಕೆ. ಸದಾನಂದ, ಭಾಸ್ಕರ ಕೆ., ಗಣೇಶ್ ಗುಜರನ್, ಮುಂಬಯಿ ಉದ್ಯಮಿಗಳಾದ ಅಶೋಕ್ ಶೆಟ್ಟಿ ಮುಂಬಯಿ, ವಿಜಯ ಎಸ್. ಶೆಟ್ಟಿ, ಡಾ.ಬಿ. ವಿ. ಶೆಟ್ಟಿ ಮುಂಬಯಿ, ಸುಜಯ ಶೆಟ್ಟಿ ಕಾರ್ಕಳ, ಮಾಜಿ ಶಾಸಕ ಕಾಲಾಜಿ ಮೆಂಡನ್, ಪೇಟೆಮನೆ ಪ್ರಕಾಶ್ ಶೆಟ್ಟಿ, ಶ್ರೀನಾಥ್ ಹೆಗ್ಡೆ, ವೈ. ಸುಕುಮಾರ್, ನವೀನ್‌ಚಂದ್ರ ಜೆ. ಶೆಟ್ಟಿ, ವೈ. ಎನ್. ರಾಮಚಂದ್ರ ರಾವ್, ನವೀನ್ ಎನ್. ಶೆಟ್ಟಿ ಮಾಧವ ಶೆಟ್ಟಿ, ಅನಂತ್ರಾಜ ರಾವ್ ಬೆಂಗಳೂರು, ಪ್ರೇಮನಾಥ ಶೆಟ್ಟಿ, ಮುರಳೀನಾಥ ಶೆಟ್ಟಿ ಮಿಥುನ್ ಹೆಗ್ಡೆ, ಸುಹಾಸ್ ಹೆಗ್ಡೆ, ಜೀರ್ಣೋದ್ಧಾರ- ಬ್ರಹ್ಮಕಲಶೋತ್ಸವ ಸಮಿತಿ ಸದಸ್ಯರು, ಪದಾಧಿಕಾರಿಗಳು ಉಪಸ್ಥಿತರಿದ್ದರು.