ಲೋಕಬಂಧು ನ್ಯೂಸ್ ಉಡುಪಿ, ಜೂ.8
ಪರ್ಯಾಯ ಪೀಠಾಧೀಶ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರ ಆಶಯದಂತೆ ಪರ್ಯಾಯ ಶೀರೂರು ಶ್ರೀಕೃಷ್ಣ ಮಠದಲ್ಲಿ ನಡೆಯುತ್ತಿರುವ ಶ್ರೀಕೃಷ್ಣ ಮಂತ್ರ ಲೇಖನ ಯಜ್ಞ ಪುಸ್ತಕ ಸಮರ್ಪಣೆ ಅಂಗವಾಗಿ ಕೃಷ್ಣಮಠದ ಯಾಗಶಾಲೆಯಲ್ಲಿ ಸೋಮವಾರ ಶ್ರೀಕೃಷ್ಣ ಮಂತ್ರ ಹೋಮ ನಡೆಯಿತು.ಪರ್ಯಾಯ ಶೀರೂರು ಶ್ರೀ ವೇದವರ್ಧನತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿದ್ದರು.
ಭಕ್ತರು ತಾವು ಬರೆದ ಕೃಷ್ಣಮಂತ್ರ ಲೇಖನ ಪುಸ್ತಕಗಳನ್ನು ಸಮರ್ಪಿಸಿದರು.