ಬಾಲಕನನ್ನು ರಕ್ಷಿಸಿದ ಅಕ್ಕಪಡೆ

ಲೋಕಬಂಧು ನ್ಯೂಸ್ | ಉಡುಪಿ, ಜು.24
ನಗರದ ಶಾಲೆಯೊಂದರಲ್ಲಿ 8ನೇ ತರಗತಿಯಲ್ಲಿ ಕಲಿಯುತ್ತಿರುವ ಬಾಲಕನೋರ್ವ ಕಾಣೆಯಾಗಿರುವ ಕುರಿತು ಅಕ್ಕಪಡೆಗೆ ಜಿಲ್ಲಾ ಕಂಟ್ರೋಲ್ ರೂಮ್'ನಿಂದ ಕರೆ ಬಂದ ಹಿನ್ನೆಲೆಯಲ್ಲಿ ಆತನನ್ನು ಪತ್ತೆ ಮಾಡಿ ಬಾಲಕನ ಪಾಲಕರಿಗೊಪ್ಪಿಸಿದ ಘಟನೆ ನಡೆದಿದೆ.
ದೂರು ಕರೆಗೆ ತಕ್ಷಣ ಸ್ಪಂದಿಸಿದ ಅಕ್ಕಪಡೆಯ ಸಿಬ್ಬಂದಿಗಳು ಪತ್ತೆ ಕಾರ್ಯದಲ್ಲಿ ತೊಡಗಿದ್ದು, ಕೆಎಸ್ಆರ್.ಟಿ.ಸಿ ಬಸ್ ನಿಲ್ದಾಣ ಬಳಿ ಹುಡುಕುತ್ತಿರುವಾಗ ಕಾಣೆಯಾಗಿರುವ ಹುಡುಗ ಮುದ್ದೇಬಿಹಾಳಕ್ಕೆ ಹೊರಟಿದ್ದು ಕಂಡುಬಂತು.


ತಕ್ಷಣ ಕಾರ್ಯಪ್ರವೃತ್ತರಾದ ಅಕ್ಕಪಡೆಯ ಸಿಬ್ಬಂದಿಗಳು ಮುದ್ದೇಬಿಹಾಳಕ್ಕೆ ಹೊರಟಿದ್ದ ಬಸ್ಸನ್ನು ನಿಲ್ಲಿಸಿ, ಅದರಲ್ಲಿದ್ದ ಬಾಲಕನನ್ನು ವಶಕ್ಕೆ ಪಡೆದು, ಮಹಿಳಾ ಪೊಲೀಸ್ ಠಾಣೆಗೆ ಒಪ್ಪಿಸಿದರು. ಬಳಿಕ ಪಾಲಕರಿಗೆ ಒಪ್ಪಿಸಲಾಯಿತು.