ಗೋಕರ್ಣ ಗಣಪತಿ ಸ್ಪರ್ಶ ದರ್ಶನಕ್ಕೆ ನಿಷೇಧ

ಲೋಕಬಂಧು ನ್ಯೂಸ್ ಗೋಕರ್ಣ, ಜು.24
ಸುಮಾರು ಸಾವಿರ ವರ್ಷಗಳ ಇತಿಹಾಸವಿರುವ ಗೋಕರ್ಣದ ಶ್ರೀ ಮಹಾಗಣಪತಿ ದೇವಸ್ಥಾನದ ಪುರಾತನ ಶಿಲಾ ವಿಗ್ರಹ ಸವೆದು ಹೋಗುತ್ತಿರುವ ಹಿನ್ನೆಲೆಯಲ್ಲಿ ಇನ್ನುಮುಂದೆ ಭಕ್ತರು ಸ್ಪರ್ಶಿಸಿ ಪೂಜೆ ಸಲ್ಲಿಸುವುದನ್ನು ನಿಷೇಧಿಸಲಾಗಿದೆ.
ಧಾರ್ಮಿಕ ದತ್ತಿ‌ ಇಲಾಖೆ ಸಹಾಯಕ ಆಯುಕ್ತೆ ಸುಧಾ ತಲವಾರ ಅವರು ಈ ಆದೇಶ ಹೊರಡಿಸಿದ್ದಾರೆ.


ಪರ್ಯಾಯ (ಶಿಫ್ಟ್) ಉಸ್ತುವಾರಿ ಅರ್ಚಕರನ್ನು ಹೊರತುಪಡಿಸಿ ಇತರ ಅರ್ಚಕರು, ವಿಐಪಿಗಳು, ಭಕ್ತರಿಗೆ ಗರ್ಭಗುಡಿಗೆ ಪ್ರವೇಶವಿಲ್ಲ. ವಿಗ್ರಹಕ್ಕೆ ಭಕ್ತರು ಅಭಿಷೇಕ, ಸ್ಪರ್ಶ ಮಾಡುವುದನ್ನು ಸಂಪೂರ್ಣ ನಿಷೇಧಿಸಲಾಗಿದ್ದು, ದೂರದಿಂದಲೇ ದೇವರ ದರ್ಶನ ಪಡೆಯಬೇಕು‌. ಆರತಿಯೂ ಗರ್ಭಗುಡಿಯ ಹೊರಗಡೆಯೇ ನಡೆಯಲಿದೆ.