ಕೃಷ್ಣಮಠದಲ್ಲಿ ಮಹಾಭಿಷೇಕ

ಲೋಕಬಂಧು ನ್ಯೂಸ್ | ಉಡುಪಿ, ಜು.24
ವರ್ಷಂಪ್ರತಿ ಆಷಾಢ ಶುದ್ಧ ದಶಮಿಯಂದು ಉಡುಪಿ ಶ್ರೀಕೃಷ್ಣ ಮಠದಲ್ಲಿ ನಡೆಯುವ ವಾರ್ಷಿಕ ಮಹಾಭಿಷೇಕ ಶುಕ್ರವಾರ ನಡೆಯಿತು.
ಪರ್ಯಾಯ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಶ್ರೀಕೃಷ್ಣನಿಗೆ ಪಂಚಾಮೃತ, ಸೀಯಾಳ ಸಹಿತ ಮಹಾಭಿಷೇಕ ನೆರವೇರಿಸಿದರು.
ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಭಾಗವಹಿಸಿದ್ದರು.


ಶನಿವಾರ ತಪ್ತ ಮುದ್ರಾಧಾರಣೆ ನಡೆಯಲಿದೆ.