ನಂದಿನಿ ಬೆಣ್ಣೆ, ತುಪ್ಪ ಬೆಲೆ ಹೆಚ್ಚಳ

ಲೋಕಬಂಧು ನ್ಯೂಸ್ ಬೆಂಗಳೂರು, ಜು.24
ಕೆಲವು ದಿನಗಳ ಹಿಂದಷ್ಟೇ ತುಪ್ಪ ಸೇರಿದಂತೆ ನಂದಿನಿ ಉತ್ಪನ್ನಗಳ ದರ ಇಳಿಕೆ ಮಾಡಿದ್ದ ಕೆಎಂಎಫ್, ಇದೀಗ ಮತ್ತೆ ತುಪ್ಪ ಮತ್ತು ಬೆಣ್ಣೆ ದರ ಏರಿಕೆ ಮಾಡುವ ಮೂಲಕ ಗ್ರಾಹಕರ ಜೇಬಿಗೆ ಬಿಸಿ ಮುಟ್ಟಿಸಿದೆ.
ಒಂದು ಕೆಜಿ ನಂದಿನಿ ತುಪ್ಪಕ್ಕೆ 15 ರೂ. ಏರಿಕೆಯಾಗಿದ್ದರೆ, ಬೆಣ್ಣೆ ದರವ ಕೆಜಿಗೆ 22 ರೂ. ಹೆಚ್ಚಿಸಲಾಗಿದೆ. ಹೊಸ ದರ ಶುಕ್ರವಾರ (ಜುಲೈ24)ದಿಂದಲೇ ಜಾರಿಗೆ ಬಂದಿದೆ.



ಪರಿಷ್ಕೃತ ದರ ಪ್ರಕಾರ 700 ರೂ. ಇದ್ದ ಒಂದು‌ ಕೆಜಿ ತುಪ್ಪ 715 ರೂ. ಮತ್ತು 610 ರೂ. ಇದ್ದ ಒಂದು ಕೆಜಿ ಬೆಣ್ಣೆ 660 ರೂ.ಗೆ ಏರಿಕೆಯಾಗಿದೆ.