ಲೋಕಬಂಧು ನ್ಯೂಸ್ ತಿರುವನಂತಪುರ, ಜು.24
ಪ್ರಸಿದ್ಧ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನದ ಚಿನ್ನ ಕಳವು ಪ್ರಕರಣದ ತನಿಖೆಯಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ತಿರುವಾಂಕೂರು ದೇವಸ್ವಮ್ ಮಂಡಳಿ ಮಾಜಿ ಅಧ್ಯಕ್ಷ ಪಿ.ಎಸ್.ಪ್ರಶಾಂತ್'ನನ್ನು ಎಸ್ಐಟಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.ಇದೇ ಪ್ರಕರಣದಲ್ಲಿ ಟಿಡಿಬಿ ಮಾಜಿ ಸದಸ್ಯ ಅಜಿ ಕುಮಾರ್ ಮತ್ತು ದೇವಸ್ಥಾನದ ಕಾಣಿಕೆಗಳ ಉಸ್ತುವಾರಿ ಅಧಿಕಾರಿ ಆರ್.ರೆಜಿಲಾಲ್ ಎಂಬೀರ್ವರನ್ನೂ ಎಸ್‌ಐಟಿ ವಿಚಾರಣೆ ಮಾಡಿದೆ.
2019ರಲ್ಲಿ ದೇವಳದ ಗರ್ಭಗುಡಿ ಮತ್ತು ದ್ವಾರಪಾಲಕರ ಚಿನ್ನದ ಚೌಕಟ್ಟುಗಳಿಗೆ ಪಾಲಿಶ್ ಮಾಡುವ ನೆಪದಲ್ಲಿ ಚಿನ್ನ ಕಳವು ಮಾಡಿ, ಬದಲಾಗಿ ಬೇರೆ ಲೋಹ ಅಳವಡಿಸಿದ ದೂರಿನಡಿ ತನಿಖೆ ನಡೆಯುತ್ತಿದೆ.