ಲೋಕಬಂಧು ನ್ಯೂಸ್ | ನಾಸಿಕ್
ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರಭಾರತೀ ಮಹಾಸ್ವಾಮೀಜಿ ಸಮ್ಮುಖದಲ್ಲಿ ನಾಸಿಕ್ ಸಿಂಹಸ್ಥ ಕುಂಭಮೇಳಕ್ಕೆ ಶನಿವಾರ ಚಾಲನೆ ನೀಡಲಾಯಿತು.
ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಧ್ವಜಾರೋಹಣ ನೆರವೇರಿಸಿದರು.
ಮಹಾರಾಷ್ಟ್ರದ ನಾಸಿಕ್ ಮತ್ತು ತ್ರಯಂಬಕೇಶ್ವರದಲ್ಲಿ ಜಟಾಧಾರಿ ಗುರು (ಬೃಹಸ್ಪತಿ ಗ್ರಹ) ಸಿಂಹ ರಾಶಿಗೆ ಪ್ರವೇಶಿಸುವ ಅಪೂರ್ವ ಸಂದರ್ಭದಲ್ಲಿ ನಾಸಿಕ್ ಸಿಂಹಸ್ಥ ಕುಂಭಮೇಳ ನಡೆಯಲಿದ್ದು, ಅ. 31ರಿಂದ 2028ರ ಜು.24ರ ವರೆಗೆ ಸುಮಾರು 21 ತಿಂಗಳ ಕಾಲ ನಡೆಯಲಿದೆ.
ಜಗದ್ಗುರುಗಳಿಂದ ಪ್ರಥಮ ಪುಣ್ಯಸ್ನಾನ
ಬಳಿಕ ಜಗದ್ಗುರು ಶ್ರೀ ವಿಧುಶೇಖರಭಾರತೀ ಮಹಾಸ್ವಾಮಿಗಳವರು ಪ್ರಥಮ ಪುಣ್ಯಸ್ನಾನ ನೆರವೇರಿಸಿದರು.
