ಲೋಕಬಂಧು ನ್ಯೂಸ್ | ಉಡುಪಿ, ಮೇ 7
ಮಲ್ಪೆಯ ಶ್ರೀಕೃಷ್ಣ ಪರಿಸರ ಪ್ರತಿಷ್ಠಾನ ಆಶ್ರಯದಲ್ಲಿ ಕೃಷ್ಣಾಪುರ, ಅದಮಾರು, ಪಲಿಮಾರು, ಪೇಜಾವರ ಮತ್ತು ಸೋದೆ ಮಠಾಧೀಶರ ಮಾರ್ಗದರ್ಶನದಲ್ಲಿ ಅದಮಾರು ಮಠಾಧೀಶ ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ನೇತೃತ್ವದಲ್ಲಿ ಮೇ 15ರಿಂದ 31ರ ವರೆಗೆ ಮಲ್ಪೆ ಕಡಲತೀರದಲ್ಲಿ ಆನಂದ ಶರಧಿ ಕಾರ್ಯಕ್ರಮ ನಡೆಯಲಿದ್ದು ಬೃಹತ್ ಕೃಷಿ ಮೇಳ, ಭಜನಾ ಕಮ್ಮಟ ಹಾಗೂ ಮಾತೃ ವಂದನಾ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮದ ಪೂರ್ವಭಾವಿಯಾಗಿ ಮಲ್ಪೆ ಶಿವಪಂಚಾಕ್ಷರಿ ಭಜನಾ ಮಂದಿರದಲ್ಲಿ ಕರಾವಳಿ ಭಾಗದ ವಿವಿಧ ಭಜನಾ ಮಂದಿರಗಳು ಹಾಗೂ ಸಂಘಸಂಸ್ಥೆಗಳ ಪದಾಧಿಕಾರಿಗಳ ಸಭೆ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಯಶಪಾಲ್ ಸುವರ್ಣ ಕಾರ್ಯಕ್ರಮದ ಯಶಸ್ಸಿಗೆ ತಮ್ಮ ಸಂಪೂರ್ಣ ಸಹಕಾರದ ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ಸಹಕರಿಸುವಂತೆ ಮನವಿ ಮಾಡಿದರು.
ಸಾಧು ಸಾಲ್ಯಾನ್, ಶ್ರೀಶ ಭಟ್ ಕಡೆಕಾರ್, ಗೋವಿಂದರಾಜ್, ದಿನೇಶ್ ಪುತ್ರನ್, ರತ್ನಕುಮಾರ್, ಪಾಂಡುರಂಗ ಮಲ್ಪೆ, ವಿಜಯ ಕೊಡವೂರು, ತಾರಾ ಆಚಾರ್ಯ, ಸ್ಥಳೀಯರಾದ ಮಂಜು ಕೊಳ, ರಾಧಾಕೃಷ್ಣ ಮೆಂಡನ್ ಹಾಗೂ ವಿವಿಧ ಭಜನಾ ಮಂದಿರ, ಮಾತೃ ಮಂಡಳಿ ಹಾಗೂ ಸಂಘಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
