ಕಾಪು ಹೊಸಮಾರಿಗುಡಿ ಸನ್ನಿಧಿಗೆ ನಟ ಶಶಿಕುಮಾರ್ ಭೇಟಿ

ಲೋಕಬಂಧು ನ್ಯೂಸ್ | ಕಾಪು, ಮೇ 6
ಕನ್ನಡ ಚಲನಚಿತ್ರ ನಟ ಶಶಿಕುಮಾರ್ ಮೇ 1ರಂದು ಕಾಪು ಶ್ರೀ ಹೊಸಮಾರಿಗುಡಿ ಸನ್ನಿಧಿಗೆ ಆಗಮಿಸಿ, ಉಚ್ಚಂಗಿ ಸಹಿತ ಶ್ರೀ ಮಾರಿಯಮ್ಮ ದೇವಿಯ ದರುಶನ ಪಡೆದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಾರಿಯಮ್ಮನ ಸ್ವರ್ಣ ಗದ್ದುಗೆ ಮತ್ತು ವಿವಿಧ ಶೈಲಿಯ ಕಲಾತ್ಮಕ ಕೆತ್ತನೆಗಳನ್ನು ಕಂಡು ಬೆರಗಾಗಿದ್ದೇನೆ. ಅವಕಾಶ ಸಿಕ್ಕಾಗ ಮತ್ತೆ ಮತ್ತೆ ಈ ಕ್ಷೇತ್ರಕ್ಕೆ ಭೇಟಿ ನೀಡುತ್ತೇನೆ ಎಂದರು.


ದೇವಳದ ವ್ಯವಸ್ಥಾಪನ ಸಮಿತಿ ಮತ್ತು ಅಭಿವೃದ್ಧಿ ಸಮಿತಿ ವತಿಯಿಂದ ಗೌರವಿಸಿ, ಅಮ್ಮನ ಅನುಗ್ರಹ ಪ್ರಸಾದ ನೀಡಲಾಯಿತು.


ಮಾತೃ ವೈಭವ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಯೋಗೀಶ್ ವಿ. ಶೆಟ್ಟಿ ಬಾಲಾಜಿ, ಪ್ರಬಂಧಕ ಗೋವರ್ಧನ ಸೇರಿಗಾರ್ ಮೊದಲಾದವರಿದ್ದರು.