ಸಮಾಜಮುಖಿ ಚಿಂತನೆಯಿಂದ ದೇಶದ ಅಭಿವೃದ್ಧಿ

ಲೋಕಬಂಧು ನ್ಯೂಸ್ ಉಡುಪಿ, ಮೇ 19
ಉದ್ಯಮಿಗಳು ಸಮಾಜಮುಖಿ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಿದರೆ ದೇಶದ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು  ಕೊಡವೂರು ಮಹಾರುದ್ರ ಯಾಗ ಸಮಿತಿ ಕಾರ್ಯಾಧ್ಯಕ್ಷ ಹಾಗೂ ಉದ್ಯಮಿ ಪ್ರಸಾದ್ ರಾಜ್ ಕಾಂಚನ್ ಅಭಿಪ್ರಾಯ ವ್ಯಕ್ತಪಡಿಸಿದರು.ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥವಾಗಿ ಆಯೋಜಿಸಿದ್ದ ಮಹಾರುದ್ರ ಯಾಗದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ, ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಎಲ್ಲವನ್ನೂ ಸರ್ಕಾರ ಮಾಡಲು ಸಾಧ್ಯವಿಲ್ಲ. ಹಾಗಾಗಿ ನನ್ನಂಥ ಉದ್ಯಮಿಗಳು ಸಮಾಜಮುಖಿ ಚಿಂತನೆ ಬೆಳೆಸಿಕೊಂಡು ಸಾಮಾಜಿಕ ಕಾರ್ಯಗಳನ್ನು ಹೆಚ್ಚೆಚ್ಚು ಕೈಗೊಳ್ಳಬೇಕು. ಧಾರ್ಮಿಕತೆ ಜೊತೆಗೆ ಮಕ್ಕಳಲ್ಲಿ ಸಾಮಾಜಿಕ ಪ್ರಜ್ಞೆ, ಕಲ್ಪನೆ ಮತ್ತು ಸೇವಾಭಾವನೆ ಬೆಳೆಸಬೇಕು ಎಂದರು.


ಮಹಾರುದ್ರ ಯಾಗ ಅಂಗವಾಗಿ ಉದ್ಯೋಗ ಮೇಳ, ಆರೋಗ್ಯ ಮೇಳದಂಥ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾಗಿ ತಿಳಿಸಿದ ಅವರು, ದೇವರು ಪ್ರೇರಣೆ ನೀಡಿದರೆ ಯಾವುದೇ ಕಾರ್ಯವೂ ಸುಗಮವಾಗಿ ಈಡೇರುತ್ತದೆ ಎನ್ನುವುದಕ್ಕೆ ಈ ಮಹಾರುದ್ರ ಯಾಗವೇ ಸಾಕ್ಷಿ. ಯಾವುದೇ ಅಡಚಣೆ ಇಲ್ಲದೆ ಈ ಮಹಾಕಾರ್ಯ ಯಶಸ್ವಿಯಾಗಿ ನೆರವೇರಿದೆ ಎಂದರು.


ಕಾರ್ಯಕ್ರಮದಲ್ಲಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ, ಹೋಟೆಲ್  ಕಿದಿಯೂರು ಪ್ರವರ್ತಕ ಭುವನೇಂದ್ರ ಕಿದಿಯೂರು, ಉದ್ಯಮಿ ಮನೋಹರ ಶೆಟ್ಟಿ, ರಾಘವೇಂದ್ರ ಶೆಟ್ಟಿ, ಪ್ರಖ್ಯಾತ್ ಶೆಟ್ಟಿ, ಸುಧಾಕರ್ ಶೆಟ್ಟಿ ಮೈರ್ಮಾಡಿ, ಭುಜಂಗ ಶೆಟ್ಟಿ, ಹರಿಪ್ರಸಾದ್ ಐತಾಳ್, ಮೀನಾಕ್ಷಿ ಮಾಧವ ಬನ್ನಂಜೆ, ಆಶಾ ಚಂದ್ರಶೇಖರ್, ರತ್ನಾಕರ ಸಾಲಿಯಾನ್, ದಯೇಶ್ ಕಾಂಚನ್, ಸುರೇಂದ್ರ ಕುಂದರ್, ರವಿ ಕರ್ಕೇರ, ಸುಧಾಕರ್ ಎ. ಕುಂದರ್, ವಿಠಲ ಕರ್ಕೇರ, ಕಿರಣ್ ಕುಮಾರ್, ರತನ್, ಸುಧಾಕರ್ ಕಲ್ಮಾಡಿ, ರಾಮಚಂದ್ರ ಕೋಟ್ಯಾನ್, ಶರತ್ ಕುಮಾರ್, ದಾಮೋದರ, ಅಶೋಕ್ ಕುಂದರ್, ಗಣೇಶ್ ಅಮೀನ್, ಹರೀಶ್ ಕುಮಾರ್, ಸುರೇಶ್ ಅಮೀನ್, ದಯಾಕರ್ ಎ. ಸುವರ್ಣ, ದಿವ್ಯಾರಾಣಿ, ಪ್ರದೀಪ್ ಶೆಟ್ಟಿ, ಕೆ. ಕೃಷ್ಣಮೂರ್ತಿ ಆಚಾರ್ಯ, ತಾರಾನಾಥ ಪೂಜಾರಿ, ಪ್ರಕಾಶ್ ಜಿ. ಕೊಡವೂರು ಮೊದಲಾದವರಿದ್ದರು.


ಸಹ ಸಂಚಾಲಕ ಬಾಲಕೃಷ್ಣ ಕೊಡವೂರು ಸ್ವಾಗತಿಸಿದರು. ನಂದಕಿಶೋರ್ ಮತ್ತು ದಯಾನಂದ ಕಾರ್ಯಕ್ರಮ ನಿರೂಪಿಸಿದರು.