ಕೊಡವೂರು ಮಹಾರುದ್ರ ಯಾಗ: ವಸ್ತುಪ್ರದರ್ಶನ ಮಳಿಗೆ, ಮನರಂಜನಾ ಕಾರ್ಯಕ್ರಮಗಳಿಗೆ ಚಾಲನೆ

ಲೋಕಬಂಧು ನ್ಯೂಸ್ ಉಡುಪಿ, ಮೇ 10
ಉದ್ಯಮಿ ಹಾಗೂ ಕಾಂಗ್ರೆಸ್ ಮುಂದಾಳು ಪ್ರಸಾದ್ ರಾಜ್ ಕಾಂಚನ್ ಲೋಕ ಕಲ್ಯಾಣಾರ್ಥವಾಗಿ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಮೇ 14ರಿಂದ 19 ರವರೆಗೆ ಆಯೋಸಿರುವ ಮಹಾರುದ್ರ ಯಾಗ ಅಂಗವಾಗಿ ಏರ್ಪಡಿಸಲಾದ ವಸ್ತು ಪ್ರದರ್ಶನ ಮಳಿಗೆ ಮತ್ತು ಮನೋರಂಜನಾ ಆಟಗಳಿಗೆ ಭಾನುವಾರ ಚಾಲನೆ ನೀಡಲಾಯಿತು.ಕಾಂಗ್ರೆಸ್‌ನ ಹಿರಿಯ ನಾಯಕಿ ಸರಳಾ ಬಿ. ಕಾಂಚನ್ ಅವರು ವಸ್ತು ಪ್ರದರ್ಶನ ಮಳಿಗೆ ಹಾಗೂ ಮನೋರಂಜನಾ ಆಟಗಳನ್ನು ಉದ್ಘಾಟಿಸಿದರು.ಇದೇ ಸಂದರ್ಭದಲ್ಲಿ 'ಪ್ರತಿಭೆ ನಿಮ್ಮದು– ವೇದಿಕೆ ನಮ್ಮದು' ಪ್ರತಿಭಾ ಪ್ರದರ್ಶನ ಕಾರ್ಯಕ್ರಮಕ್ಕೆ ಉಡುಪಿ ಜಿಲ್ಲಾ ಮಹಿಳಾ ಮಂಡಳಿಗಳ ಒಕ್ಕೂಟದ ಅಧ್ಯಕ್ಷೆ ವಾಸಂತಿ ರಾವ್ ಕೊರಡ್ಕಲ್ ಚಾಲನೆ ನೀಡಿದರು.


ಈ ಸಂದರ್ಭದಲ್ಲಿ ಮಾತನಾಡಿದ ಸರಳಾ ಬಿ. ಕಾಂಚನ್, ದೇವಸ್ಥಾನದ ಸಹಕಾರದೊಂದಿಗೆ ತಮ್ಮ ಕುಟುಂಬ ಹಾಗೂ ಸಮಾಜದ ಸರ್ವರ ಸಹಭಾಗಿತ್ವದಲ್ಲಿ ಆಯೋಜಿಸಲಾಗುತ್ತಿರುವ ಮಹಾರುದ್ರ ಯಾಗದ ಯಶಸ್ಸಿಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.


ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ನಗರಸಭಾ ಮಾಜಿ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವ್ಯವಸ್ಥಾಪನ‌ ಸಮಿತಿ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು, ಮಹಾರುದ್ರ ಯಾಗ ಸಮಿತಿ ಪ್ರಧಾನ ಸಂಚಾಲಕರಾದ ತಾರನಾಥ ಪೂಜಾರಿ ಮತ್ತು ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮೂಲ್ಕಿ, ಸಂಚಾಲಕರಾದ ನಂದಕಿಶೋರ್ ಕೆಮ್ಮಣ್ಣು ಮತ್ತು ರಮೇಶ್ ತಿಂಗಳಾಯ, ಪದಾಧಿಕಾರಿಗಳಾದ ಡಾ. ವಿಜಯೇಂದ್ರ ವಸಂತ್, ಟಿ. ರಾಘವೇಂದ್ರ ರಾವ್ ಕೊಡವೂರು, ರಾಜಾ ಎ. ಸೇರಿಗಾರ, ಪೀಟರ್ ಸಿಕ್ವೇರ, ರೂಫಸ್ ಸಿಕ್ವೇರ, ಹೇಮಾವತಿ ಸಾಲ್ಯಾನ್, ಕೇಶವ ಕೋಟ್ಯಾನ್ ಮೊದಲಾದವರಿದ್ದರು.