ಲೋಕಬಂಧು ನ್ಯೂಸ್ | ಉಡುಪಿ, ಮೇ 8
ಉದ್ಯಮಿ, ಸಮಾಜ ಸೇವಕ ಹಾಗೂ ಕಾಂಗ್ರೆಸ್ ಮುಂದಾಳು ಪ್ರಸಾದ್ ರಾಜ್ ಕಾಂಚನ್ ನೇತೃತ್ವದಲ್ಲಿ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಮೇ 14ರಿಂದ 19ರ ವರೆಗೆ ನಡೆಯುವ ಮಹಾರುದ್ರ ಯಾಗದ ಕಾರ್ಯಕ್ರಮಕ್ಕೆ ಬೆಂಗಳೂರು ಬ್ರಹ್ಮಶ್ರೀ ಅನಂದ ಸಿದ್ಧಿಪೀಠದ ಸಂಸ್ಥಾಪಕ ಮತ್ತು ಶ್ರೀ ಭೂವರಾಹ ಸಾಲಿಗ್ರಾಮ ಕ್ಷೇತ್ರದ ಮಹರ್ಷಿ ಡಾ.ಅನಂದ ಗೂರೂಜಿ ಅವರನ್ನು ಮಹಾರುದ್ರ ಯಾಗದ ಸೇವಾಕರ್ತ ಹಾಗೂ ಮಹಾರುದ್ರ ಯಾಗ ಸಮಿತಿ ಕಾರ್ಯಾಧ್ಯಕ್ಷ ಪ್ರಸಾದ್ ರಾಜ್ ಕಾಂಚನ್ ಅಮಂತ್ರಣ ಪತ್ರಿಕೆ ನೀಡಿ ಆಹ್ವಾನಿಸಿದರು.
ಈ ಸಂದರ್ಭದಲ್ಲಿ ಪ್ರಸಾದ್ ರಾಜ್ ಕಾಂಚನ್ ಹಾಗೂ ಪ್ರಧಾನ ಸಂಚಾಲಕರಾದ ಕೃಷ್ಣಮೂರ್ತಿ ಅಚಾರ್ಯ ಕಿನ್ನಿಮೂಲ್ಕಿ ಮತ್ತು ತಾರನಾಥ ಪೂಜಾರಿ ಅವರನ್ನು ಶ್ರೀಗಳು ಗೌರವಿಸಿದರು.
