ಕೊಡವೂರು ಮಹಾರುದ್ರಯಾಗ: ಕನ್ನಿ ಮೀನುಗಾರರ ಸಭೆ

ಲೋಕಬಂಧು ನ್ಯೂಸ್ | ಉಡುಪಿ, ಮೇ 6
ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಉದ್ಯಮಿ, ಕಾಂಗ್ರೆಸ್ ಮುಂದಾಳು ಪ್ರಸಾದ್ ರಾಜ್ ಕಾಂಚನ್ ನೇತೃತ್ವದಲ್ಲಿ ನಡೆಯಲಿರುವ ಮಹಾರುದ್ರಯಾಗ ಕಾರ್ಯಕ್ರಮದ ಪೂರ್ವಭಾವಿಯಾಗಿ ಮಲ್ಪೆಯ ಕನ್ನಿ ಮೀನುಗಾರರ ಸಂಘದಲ್ಲಿ ಮೀನುಗಾರರೊಂದಿಗೆ ಸಭೆ ನಡೆಸಲಾಯಿತು.
ಪುಣ್ಯತಮವಾದ ಈ ಕಾರ್ಯದಲ್ಲಿ ಸಮಸ್ತ ಮೀನುಗಾರರು ಪಾಲ್ಗೊಂಡು ಶ್ರೀ ಶಂಕರನಾರಾಯಣ ಸ್ವಾಮಿಯ ಅನುಗ್ರಹಕ್ಕೆ ಪಾತ್ರರಾಗುವಂತೆ ಯಾಗ  ಸಮಿತಿಯ ಪ್ರಧಾನ ಸಂಚಾಲಕ ಕೃಷ್ಣಮೂರ್ತಿ ಅಚಾರ್ಯ ಮನವಿ ಮಾಡಿದರು.


ಕನ್ನಿ ಮೀನುಗಾರರ ಸಂಘದ ಆಧ್ಯಕ್ಷ ದಯಾಕರ್ ವಿ. ಸುವರ್ಣ ಅವರಿಗೆ ಅಮಂತ್ರಣ  ಪತ್ರಿಕೆ ನೀಡಿ, ಸಂಘದ ಸರ್ವ ಸದಸ್ಯರು ಭಾಗವಹಿಸುವಂತೆ ವಿನಂತಿಸಲಾಯಿತು.


ಈ ಸಂದರ್ಭದಲ್ಲಿ ಮಹಾರುದ್ರಯಾಗ ಸಮಿತಿ ಪ್ರಧಾನ ಸಂಚಾಲಕ ತಾರಾನಾಥ, ಸಂಚಾಲಕ ರಮೇಶ್ ತಿಂಗಳಾಯ ಉಪಸ್ಥಿತರಿದ್ದರು.