ಲೋಕಬಂಧು ನ್ಯೂಸ್ | ಚಿಕ್ಕಮಗಳೂರು, ಮೇ 7
ಶೃಂಗೇರಿ ವಿಧಾನಸಭಾ ಕ್ಷೇತ್ರದ ಮತ ಮರು ಎಣಿಕೆ ಪ್ರಕರಣ ಸಂವಿಧಾನಬದ್ಧವಾಗಿದ್ದು ಕೊನೆಗೂ ಜೀವರಾಜ್ ಅವರಿಗೆ ನ್ಯಾಯಾಲಯದ ಮೂಲಕ ನ್ಯಾಯ ಸಿಕ್ಕಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹರ್ಷ ವ್ಯಕ್ತಪಡಿಸಿದ್ದಾರೆ.
ಮತ ಎಣಿಕೆಯ ಅಧಿಕಾರಿಗಳು ನ್ಯಾಯಾಲಯದ ಆದೇಶದಂತೆ ಅವರ ಕರ್ತವ್ಯ ಮಾಡಿದ್ದು ಒಟ್ಟಾರೆ ಕಾಂಗ್ರೆಸ್ ಆರೋಪಿಸುವಂತೆ ಯಾವುದೇ ಗೊಂದಲ ನಡೆದಿರುವುದು ಸಾಧ್ಯವಿಲ್ಲ.
ನ್ಯಾಯಾಲಯದ ಆಜ್ಞೆ ಪರಿಪಾಲಿಸುವುದು ಸ್ಪೀಕರ್ ಕರ್ತವ್ಯವಾಗಿದ್ದು, ರಾಜ್ಯಪಾಲರ ಪ್ರವೇಶದ ನಂತರವಾದರೂ ವಿಧಾನಸಭಾಧ್ಯಕ್ಷ ಖಾದರ್ ಅವರು ಗೆಲುವು ಪಡೆದ ಬಿಜೆಪಿ ಅಭ್ಯರ್ಥಿ ಜೀವರಾಜ್ ಅವರಿಗೆ ಪ್ರಮಾಣವಚನ ಬೋಧಿಸಿರುವುದು ಸ್ವಾಗತಾರ್ಹ ಎಂದು ಕೋಟ ಹೇಳಿದ್ದಾರೆ.
ಉಳಿದಿರುವ ಸಣ್ಣ ಅವಧಿಯಲ್ಲಿ ನೂತನ ಶಾಸಕ ಜೀವರಾಜ್ ತನ್ನ ಆಡಳಿತಾತ್ಮಕ ಅನುಭವದ ಮೂಲಕ ಅಭಿವೃದ್ಧಿ ಕೆಲಸ ಮಾಡಲಿ ಎಂದು ಕೋಟ ಹಾರೈಸಿದ್ದಾರೆ.
