ಲೋಕಬಂಧು ನ್ಯೂಸ್ | ಉಡುಪಿ, ಮೇ 9
ಕುತ್ಪಾಡಿ ಎಸ್.ಡಿಎಂ. ಆಯುರ್ವೇದ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಸೆ.29ರಿಂದ ಅ.1ರ ವರೆಗೆ ನಡೆಯಲಿರುವ 'ಆಟೋ ಇಮ್ಯೂನ್ ಅಸ್ವಸ್ಥತೆಗಳಲ್ಲಿ ಟ್ರಾನ್ಸ್ಲೇಷನಲ್ ಆಯುರ್ವೇದ' ಕುರಿತ 6ನೇ ಅಂತರರಾಷ್ಟ್ರೀಯ ಸಮ್ಮೇಳನ ಕ್ಷಮತ್ವಂನ ಮಾಹಿತಿಪತ್ರ (ಬೋಷರ್)ವನ್ನು ಧರ್ಮಸ್ಥಳದಲ್ಲಿ ಡಾ.ಡಿ.ವೀರೇಂದ್ರ ಹೆಗ್ಗಡೆ ಬಿಡುಗಡೆಗೊಳಿಸಿದರು.
ಕಾಲೇಜಿನ ಪ್ರಾಂಶುಪಾಲೆ ಡಾ.ಮಮತಾ ಕೆ.ವಿ., ಉಪಪ್ರಾಂಶುಪಾಲ ಡಾ.ನಾಗರಾಜ್ ಎಸ್. ಮತ್ತು ಸಮ್ಮೇಳನ ಆಯೋಜನಾ ಕಾರ್ಯದರ್ಶಿ ಡಾ.ಪ್ರಸನ್ನ ಮೊಗಸಾಲೆ ಉಪಸ್ಥಿತರಿದ್ದರು.
ಕ್ಷಮತ್ವಂ ಸಮ್ಮೇಳನದಲ್ಲಿ ದೇಶ-ವಿದೇಶಗಳ ಪ್ರಮುಖ ವೈದ್ಯರು, ಸಂಶೋಧಕರು ಮತ್ತು ಶಿಕ್ಷಣ ತಜ್ಞರು ಒಂದೆಡೆ ಸೇರಿ ಆಯುರ್ವೇದದ ದೃಷ್ಟಿಕೋನದಿಂದ ಆಟೋ ಇಮ್ಯೂನ್ ಅಸ್ವಸ್ಥತೆಗಳ ಸಮಗ್ರ ಮತ್ತು ಸಾಕ್ಷ್ಯಾಧಾರಿತ ಚಿಕಿತ್ಸಾ ವಿಧಾನಗಳ ಬಗ್ಗೆ ಚರ್ಚಿಸಲಿದ್ದಾರೆ.
