ಕೇರಳ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್

ಲೋಕಬಂಧು ನ್ಯೂಸ್ | ತಿರುವನಂತಪುರಂ, ಮೇ 14
ಕೇರಳದ ನೂತನ ಮುಖ್ಯಮಂತ್ರಿ ಆಯ್ಕೆ ವಿಚಾರವಾಗಿಕ್ಕೆ ಕೊನೆಗೂ ತೆರೆ ಬಿದ್ದಿದ್ದು, ಯುಡಿಎಫ್ ಮತ್ತು ಕಾಂಗ್ರೆಸ್ ಮೈತ್ರಿಕೂಟ ಹೊಸ ಮುಖ್ಯಮಂತ್ರಿಯ ಹೆಸರನ್ನು ಅಧಿಕೃತವಾಗಿ ಘೋಷಿಸಿದೆ.
ಪಕ್ಷದೊಳಗೆ ನಡೆದ ದೀರ್ಘ ಚರ್ಚೆಯ ಬಳಿಕ ವಿ.ಡಿ. ಸತೀಶನ್ ಅವರನ್ನು ನೂತನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ. ಆ ಮೂಲಕ ಕೆಲವು ದಿನಗಳಿಂದ ನಡೆಯುತ್ತಿದ್ದ ರಾಜಕೀಯ ಪ್ರಹಸನ ಕೊನೆಗೂ ಅಂತ್ಯಗೊಂಡಿದೆ.


ಮೇ 4ರಂದು ಕೇರಳ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಭರ್ಜರಿ ಜಯ ಸಾಧಿಸಿತ್ತು. ಅಂದಿನಿಂದ ಶುರುವಾದ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ವಿಚಾರದ ಚರ್ಚೆ, ಹಲವಾರು ಸಭೆ, ಲಾಬಿ, ಮಾತುಕತೆಗಳ ಬಳಿಕ ಸದ್ಯ ಉತ್ತರ ದೊರೆತಿದೆ.


ಸಿಎಂ ರೇಸ್‌ನಲ್ಲಿ ವಿ.ಡಿ. ಸತೀಶನ್ ಹೆಸರು ಸೇರಿದಂತೆ ಪ್ರಮುಖರಿಬ್ಬರ ಹೆಸರು ಹೆಚ್ಚು ಚರ್ಚೆಗೆ ಬಂದಿದ್ದವು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮತ್ತು ಹಿರಿಯ ನಾಯಕ ರಮೇಶ್ ಚೆನ್ನಿತ್ತಲ ಅವರನ್ನು ಪರಿಗಣಿಸಲಾಗಿತ್ತು. ಸದ್ಯ ಕಾಂಗ್ರೆಸ್ ಹೈಕಮಾಂಡ್ ಅಳೆದುತೂಗಿ ಅದರಲ್ಲಿ ಸತೀಶನ್​ ಅವರನ್ನು ಅಂತಿಮಗೊಳಿಸಿದೆ.