ವಿಜಯಾ ಬ್ಯಾಂಕ್ ನಿವೃತ್ತ ಅಧಿಕಾರಿಗಳ ಸಮಾವೇಶ

ಲೋಕಬಂಧು ನ್ಯೂಸ್ | ಬ್ರಹ್ಮಾವರ, ಮೇ 6
ವಿಜಯಾ ಬ್ಯಾಂಕ್ ನಿವೃತ್ತ ಅಧಿಕಾರಿಗಳ ಉಡುಪಿ ಜಿಲ್ಲಾ ಸಮಾವೇಶ ಇಲ್ಲಿನ ಆಶ್ರಯ ಸಭಾಂಗಣದಲ್ಲಿ ಈಚೆಗೆ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ, ನಾವು ಜೀವನದಲ್ಲಿ ತಲುಪಿರುವ ಹಂತ, ಅನುಭವ, ಜ್ಞಾನ ಮತ್ತು ಸಹನಶೀಲತೆಯ ಪ್ರತೀಕ. ಮಾಜಿ ಸಹೋದ್ಯೋಗಿಗಳೊಂದಿಗೆ ಭೂತಕಾಲವನ್ನು ನೆನಪಿಸಿಕೊಳ್ಳುವುದರೊಂದಿಗೆ ಈ ಸಂದರ್ಭದಲ್ಲಿ ನಾವು ನಮ್ಮ ಸಾಧನೆಗಳಿಗಿಂತ ಸಂಬಂಧಗಳು ಹೆಚ್ಚು ಮಹತ್ವಪೂರ್ಣ ಎಂಬುದನ್ನು ತಿಳಿದುಕೊಳ್ಳಬೇಕಾಗಿದೆ ಎಂದರು.


ಕಾರ್ಯಕ್ರಮದ ಅಂಗವಾಗಿ ವೈವಿಧ್ಯಮಯ ನೃತ್ಯ ಸಿಂಚನ ಮತ್ತು ನಾದ ವೈಭವ ಕಾರ್ಯಕ್ರಮವನ್ನು ಸುರಭಿ ಬೈಂದೂರು ತಂಡ ಮತ್ತು ಪ್ರತಿಭಾವಂತ 18 ಮಂದಿ ವಿದ್ಯಾರ್ಥಿಗಳೊಂದಿಗೆ ತಂಡದ ನಾಯಕ ಪಿ.ಸುಧಾಕರ್ ನೇತೃತ್ವದಲ್ಲಿ ನಡೆಯಿತು.


ಈ ಸಂದರ್ಭದಲ್ಲಿ ಗಾಯಕಿ ಗೀತಾ ಬೈಂದೂರು ಮತ್ತು ನೃತ್ಯ ಸಂಯೋಜಕಿ ನಿಶ್ಚಿತಾ ಬೈಂದೂರು ಅವರನ್ನು ಇಂದಿರಾ ಎಸ್. ಹೆಗ್ಡೆ ಮತ್ತು ದೇವಕಿ ಎಸ್. ಶೆಟ್ಟಿ ಸನ್ಮಾನಿಸಿದರು.


ಸಂಘದ ಸ್ಥಾಪಕಾಧ್ಯಕ್ಷ ಸುಬ್ಬಯ್ಯ ಹೆಗ್ಡೆ, ಮಾಜಿ ಅಧ್ಯಕ್ಷರಾದ ಆತ್ರಾಡಿ ನಾರಾಯಣ ಶೆಟ್ಟಿ, ಅಸ್ರಂಬಳ್ಳಿ ಸದಾಶಿವ ಹೆಗ್ಡೆ, ಉಳ್ತೂರು ವಾಸುದೇವ ಶೆಟ್ಟಿ, ಎಸ್. ಅಣ್ಣಪ್ಪ ಶೆಟ್ಟಿ ಮತ್ತು ರಾಜೀವ ಶೆಟ್ಟಿ, ಕಾರ್ಯದರ್ಶಿ ಮಂಜುನಾಥ ಶೆಟ್ಟಿ ಇದ್ದರು.


ನಾಲ್ವರು ಜನ ಹೊಸ ಸದಸ್ಯರನ್ನು ಸಂಘಕ್ಕೆ ಸೇರ್ಪಡೆಗೊಳಿಸಲಾಯಿತು. 430 ಮಂದಿ ಸದಸ್ಯರು ಭಾಗವಹಿಸಿದ್ದರು.


ವೇಣುಗೋಪಾಲ ಶೆಟ್ಟಿ ಸ್ವಾಗತಿಸಿ, ವಂದಿಸಿದರು. ಬಿ.ರತ್ನಾಕರ ಹೆಗ್ಡೆ ನಿರೂಪಿಸಿದರು.