ಶೃಂಗೇರಿ ಶಾರದೆಗೆ ಮಹಾಭಿಷೇಕ

ಲೋಕಬಂಧು ನ್ಯೂಸ್ | ಶೃಂಗೇರಿ
ಆಶ್ವಯುಜ ಹುಣ್ಣಿಮೆ ದಿನವಾದ ಸೋಮವಾರ  ಶೃಂಗೇರಿ ಪುರವಾಸಿನಿ ಶ್ರೀ ಶಾರದಾಂಬೆಗೆ ಮಹಾಭಿಷೇಕ ನಡೆಯಿತು.
ಭೂಮಿ ಹುಣ್ಣಿಮೆ ನಿಮಿತ್ತ ಭುವನೇಶ್ವರಿ ಅಲಂಕಾರ ಮಾಡಲಾಗಿದ್ದು, ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸನ್ನಿಧಾನಂಗಳವರು ಮತ್ತವರ ಕರಕಮಲಸಂಜಾತರಾದ ಜಗದ್ಗುರು ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರು ವಿಶೇಷ ಪೂಜೆ ನೆರವೇರಿಸಿದರು.


ರಾತ್ರಿ ಚಿನ್ನದ ದಿಂಡೀ ಸೇವೆ (ರಥೋತ್ಸವ)ಯ ತರುವಾಯ ತುಂಗಭದ್ರಾ ನದಿಯಲ್ಲಿ ತೆಪ್ಪೋತ್ಸವ ನಡೆಯಲಿದೆ. ಆ ಮೂಲಕ ಶರನ್ನವರಾತ್ರಿ ಉತ್ಸವ ಸಂಪನ್ನಗೊಳ್ಳಲಿದೆ.