ಕೊಂಕಣ್ ರೈಲ್ವೆ ಹಣಕಾಸು ನಿರ್ದೇಶಕಿಯಾಗಿ ಸಾತ್ವಿ

ಲೋಕಬಂಧು ನ್ಯೂಸ್ ಮಂಗಳೂರು
ಕೊಂಕಣ್ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್‌ ನಿರ್ದೇಶಕಿ (ಹಣಕಾಸು)ಯಾಗಿ ಕವಿತಾ ರಾಕೇಶ್ ಸಾತ್ವಿ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.ಸಾತ್ವಿ ಅವರು ಖಾಸಗಿ ಹಾಗೂ ಅರೆ ಸರ್ಕಾರಿ ವಲಯಗಳಲ್ಲಿ ಹಣಕಾಸು, ಲೆಕ್ಕಪತ್ರ ಮತ್ತು ವಾಣಿಜ್ಯ ಕಾರ್ಯಾಚರಣೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ 24 ವರ್ಷಗಳ ಅನುಭವ ಹೊಂದಿದ್ದಾರೆ.


ಪರಿವರ್ತನೆ, ವ್ಯವಹಾರ ಬಿಪಿಒ ಕಾರ್ಯಚಟುವಟಿಕೆಗಳ ವರ್ಗಾವಣೆ, ಹಣಕಾಸು ವರದಿಗಳ ಸಿದ್ದತೆ, ಆಂತರಿಕ ಹಣಕಾಸು ನಿಯಂತ್ರಣ, ಗುತ್ತಿಗೆ ನಿರ್ವಹಣೆ, ಹಣಕಾಸು ವಿಶ್ಲೇಷಣೆ, ಪ್ರಕ್ರಿಯೆಗಳ ಸುಧಾರಣೆ, ನೂತನ ವ್ಯವಸ್ಥೆಗಳ ಅನುಷ್ಠಾನ, ಹಣಕಾಸು ಯೋಜನೆ ಮತ್ತು ಬಜೆಟ್ ರೂಪಿಸುವಿಕೆ, ಅಪಾಯ ನಿರ್ವಹಣೆ, ನಿಧಿ ನಿರ್ವಹಣೆ, ಖಜಾನೆ ಕಾರ್ಯಾಚರಣೆ, ತೆರಿಗೆ, ಲೆಕ್ಕಪರಿಶೋಧನೆ ನಿಯಮಾನುಸರಣೆ, ಆಡಳಿತ ನಿರ್ವಹಣೆ, ಕಾರ್ಯತಂತ್ರದ ನಿರ್ಧಾರ ಕೈಗೊಳ್ಳುವಿಕೆ, ವ್ಯವಹಾರ ವಿಶ್ಲೇಷಣೆ, ಕಾರ್ಪೊರೇಟ್ ಹಣಕಾಸು, ಹಣಕಾಸು ಮಾದರಿಗಳ ರೂಪಿಸುವಿಕೆ ಹಾಗೂ ವ್ಯವಹಾರ ಸಲಹಾ ಕಾರ್ಯಗಳಲ್ಲಿ ಅವರು ಪರಿಣತಿ ಹೊಂದಿದ್ದಾರೆ.


ಸಾತ್ವಿ ಅವರು ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದಾರೆ.


ಮೊದಲ ಪ್ರಯತ್ನದಲ್ಲೇ ಸಿಎ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅವರು, ಆಸ್ಟ್ರೇಲಿಯಾದ ಡೀಕಿನ್ ವಿಶ್ವವಿದ್ಯಾಲಯದಿಂದ ಜಾಗತಿಕ ವ್ಯವಹಾರ ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅಲ್ಲದೆ, ಬ್ರಿಟನ್‌ನ ಎಸಿಸಿಎ ಸಂಸ್ಥೆಯಿಂದ ಅಂತಾರಾಷ್ಟ್ರೀಯ ಹಣಕಾಸು ವರದಿಗಾರಿಕೆಯಲ್ಲಿ ಡಿಪ್ಲೊಮಾ ಪಡೆದಿದ್ದಾರೆ. ಅವರ ಶೈಕ್ಷಣಿಕ ಸಾಧನೆಗಳು ವೃತ್ತಿಪರ ಬೆಳವಣಿಗೆ ಹಾಗೂ ವೃತ್ತಿಜೀವನದ ಪ್ರಗತಿಗೆ ಮಹತ್ವದ ಕೊಡುಗೆ ನೀಡಿವೆ ಎಂದು ಕೊಂಕಣ್ ರೈಲ್ವೆ ಪ್ರಕಟಣೆ ತಿಳಿಸಿದೆ.