ಅನ್ನಪೂರ್ಣೇಶ್ವರಿಯಾದ ಶೃಂಗೇರಿ ಶಾರದೆ

ಲೋಕಬಂಧು ನ್ಯೂಸ್ | ಶೃಂಗೇರಿ
ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ‌ಶಾರದಾ ಪೀಠದ ಅಧಿದೇವತೆ ಶಾರದಾಂಬೆಗೆ ಭಾನುವಾರ ಕಾಶಿಪುರಾಧೀಶ್ವರಿ ಅನ್ನಪೂರ್ಣೇಶ್ವರಿ ಅಲಂಕಾರ ಮಾಡಲಾಗಿತ್ತು.
ಆಶ್ವಯುಜ ಹುಣ್ಣಿಮೆಯಂದು ಸೋಮವಾರ ತೆಪ್ಪೋತ್ಸವದೊಂದಿಗೆ‌ ಶೃಂಗೇರಿಯಲ್ಲಿ ಭಾದ್ರಪದ ಅಮಾವಾಸ್ಯೆಯಿಂದ ಆರಂಭಗೊಂಡ ಶಾರದಾ ಶರನ್ನವರಾತ್ರಿ ಮಹೋತ್ಸವಕ್ಕೆ ತೆರೆ ಬೀಳಲಿದೆ.