ಲೋಕಬಂಧು ನ್ಯೂಸ್ | ಉಡುಪಿ, ಮೇ 20
ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ನಡೆದ ಮಹಾರುದ್ರ ಯಾಗದ ಪ್ರಯುಕ್ತ ಮಲ್ಪೆ ಕಡಲ ತೀರದಲ್ಲಿ ನಡೆಸಲಾದ ಮರಳು ಶಿಲ್ಪಾಕೃತಿ ರಚನಾ ಸ್ಪರ್ಧೆಯಲ್ಲಿ ಮಣಿಪಾಲದ ತ್ರಿವರ್ಣ ಆರ್ಟ್ ಕ್ಲಾಸ್ಸಸ್ ಕಲಾ ವಿದ್ಯಾರ್ಥಿಗಳಿಂದ ಮೂಡಿಬಂದ ಶಿವ ಯಾಗದ ಪರಿಕಲ್ಪನೆಯ ಮರಳು ಶಿಲ್ಪಾಕೃತಿ ನೆರೆದವರನ್ನು ಆಕರ್ಷಿಸಿತು.
ಕಲಾ ವಿದ್ಯಾರ್ಥಿಗಳಾದ ಆಶುತೋಷ್ ನಾಯಕ್, ವಿಕಾಸ್, ಕೃತಿ ದೇವಾಡಿಗ, ವಿದ್ಯಾರಾಣಿ, ಉಜ್ವಲ್, ಸಂತೋಷ್ ಭಟ್ ಹಾಲಾಡಿ ಅವರು ಹರೀಶ್ ಸಾಗಾ ಮಾರ್ಗದರ್ಶನದಲ್ಲಿ ರಚಿಸಲಾದ 10 ಚಚ್ಚೌಕ ಅಡಿ ವಿಸ್ತೀರ್ಣದ ಮರಳು ಶಿಲ್ಪ ಕಲಾಕೃತಿ 30 ಸಾವಿರ ರೂ. ನಗದು ಬಹುಮಾನದೊಂದಿಗೆ ಪ್ರಥಮ ಸ್ಥಾನ ಗಳಿಸಿತು.
