ಲೋಕಬಂಧು ನ್ಯೂಸ್ | ಉಡುಪಿ, ಮೇ 20
ಆನ್‌ಲೈನ್ ಮೆಡಿಸಿನ್ ಮಾರಾಟ (ಇ-ಫಾರ್ಮಸಿ) ಮತ್ತು ಭಾರಿ ರಿಯಾಯಿತಿ ನೀಡುವುದನ್ನು ವಿರೋಧಿಸಿ ಬುಧವಾರ ಉಡುಪಿ ಜಿಲ್ಲೆಯಾದ್ಯಂತ ಖಾಸಗಿ ಮೆಡಿಕಲ್ ಶಾಪ್‌ಗಳು ಬಂದ್ ಆಗಿದ್ದವು.
ಉಡುಪಿ ಜಿಲ್ಲಾ ಕೆಮಿಸ್ಟ್ ಮತ್ತು ಡ್ರಗ್ಗಿಸ್ಟ್ ಅಸೋಸಿಯೇಷನ್ ಕರೆ ನೀಡಿದ್ದ ದೇಶವ್ಯಾಪಿ ಮುಷ್ಕರಕ್ಕೆ ಸಂಪೂರ್ಣ ಬೆಂಬಲ ಘೋಷಿಸಿದ್ದು, ಜಿಲ್ಲೆಯ ಬಹುತೇಕ ಖಾಸಗಿ ಔಷಧ ಮಳಿಗೆಗಳು ಕಾರ್ಯನಿರ್ವಹಿಸಿಲ್ಲ.
ಜನೌಷಧಿ, ಅಪೋಲೊ ಫಾರ್ಮಸಿಗಳು, ಮೆಡ್ ಪ್ಲಸ್ ಸಂಸ್ಥೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದವು. ಆಸ್ಪತ್ರೆಗಳಲ್ಲಿರುವ ಮೆಡಿಕಲ್ ಅಂಗಡಿಗಳೂ ತೆರೆದಿದ್ದವು.
