ಉಡುಪಿ ಬ್ಲಾಕ್ ಕಾಂಗ್ರೆಸ್‌ನಿಂದ ನೂತನ ಬಿಷಪ್'ಗೆ ಅಭಿನಂದನೆ

ಲೋಕಬಂಧು ನ್ಯೂಸ್ | ಉಡುಪಿ, ಮೇ 21
ಉಡುಪಿಯ ನೂತನ ಬಿಷಪ್ ವಂ.ಡಾ. ಲೆಸ್ಲಿ ಕ್ಲಿಫರ್ಡ್ ಡಿ'ಸೋಜಾ ಅವರನ್ನು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ನೇತೃತ್ವದಲ್ಲಿ ಬುಧವಾರ ಧರ್ಮಾಧ್ಯಕ್ಷರ ನಿವಾಸದಲ್ಲಿ ಭೇಟಿಯಾಗಿ ಶಾಲು ಹೊದಿಸಿ ಹಾರ ತೊಡಿಸಿ ಗೌರವಿಸಿ ಅಭಿನಂದಿಸಲಾಯಿತು.
ನೂತನ ಬಿಷಪ್‌ ಅವರ ಸೇವಾ ಜೀವನ ಸಮಾಜಕ್ಕೆ ಬೆಳಕಾಗಲಿ, ಎಲ್ಲರಿಗೂ ಪ್ರೇರಣೆಯಾಗಲಿ ಎಂದು ಆಶಿಸಲಾಯಿತು.


ಅಭಿನಂದನೆ ಸ್ವೀಕರಿಸಿ ಮಾತನಾಡಿದ ಬಿಷಪ್‌ ಅವರು, ಪ್ರೀತಿ ಗೌರವದಿಂದ ಅಭಿನಂದಿಸಿದಕ್ಕೆ ಕೃತಜ್ಞತೆ ತಿಳಿಸಿ ಎಲ್ಲರಿಗೂ ದೇವರ ಆಶೀರ್ವಾದ ಇರಲಿ ಎಂದು ಹಾರೈಸಿದರು.


ಮಾನವೀಯ ಧರ್ಮ ಎಲ್ಲಕ್ಕಿಂತಲೂ ಶ್ರೇಷ್ಠ. ಪರಸ್ಪರ ಶಾಂತಿ ಸೌಹಾರ್ದತೆಯಿಂದ ಬದುಕಿ ಶೋಷಿತರು, ಅಶಕ್ತರಿಗೆ ಸಹಾಯ ಮಾಡುವ ಮೂಲಕ ಮಾನವೀಯ ಮೌಲ್ಯಗಳನ್ನು ಬೆಳೆಸೋಣ ಎಂದರು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ವಿಜಯ್ ಪೂಜಾರಿ, ನಾಯಕರಾದ ಮ್ಯಾಕ್ಸಿಮ್ ಡಿ'ಸೋಜ, ನಗರಸಭಾ ಮಾಜಿ ಸದಸ್ಯರಾದ ಪ್ರಕಾಶ್ ಅಂದ್ರಾದೆ, ಸಂಧ್ಯಾ ತಿಲಕ್‌ರಾಜ್, ಶಶಿರಾಜ್ ಕುಂದರ್, ಸುಕೇಶ್ ಕುಂದರ್, ಹೇಮಲತಾ ಹಿಲರಿ ಜತ್ತನ್ನ, ಗಣೇಶ್ ನೇರ್ಗಿ ಮತ್ತು ಲತಾ ಆನಂದ್ ಶೇರಿಗಾರ್, ಬ್ಲಾಕ್ ಕಾಂಗ್ರೆಸ್‌ ನಾಯಕರಾದ ಚಂದ್ರಮೋಹನ್, ಸತೀಶ್ ಕುಮಾರ್ ಮಂಚಿ, ಸತೀಶ್ ಕೊಡವೂರು, ಜಯವೀರ್ ಫೆಡ್ರಿಕ್ಸ್, ಶರತ್ ಶೆಟ್ಟಿ, ಮನೋಜ್ ಕರ್ಕೇರ, ವಿಲ್ಸನ್ ಸಿಕ್ವೇರ, ವನಿತಾ ಫೆರ್ನಾಂಡಿಸ್, ರಮೇಶ್ ಪಾಲ್, ಪ್ರೇಮಲತಾ ಸೋನ್ಸ್, ಜೋಸೆಫ್ ಪಿಂಟೋ, ಅನಿಲ್ ಗೊನ್ಸಾಲ್ವಿಸ್, ಲ್ಯಾನ್ಸಿ ಡಿ'ಸೋಜ, ದಯಾನಂದ್ ಡಿ. ಕಿದಿಯೂರು, ವಿವಾನ್ ಫೆರ್ನಾಂಡಿಸ್, ಐರಿನ್ ಮಿನೇಜಸ್, ರಿಚರ್ಡ್ ಡಿ'ಸಿಲ್ವಾ, ರೋಸ್ಟನ್ ಡಿ'ಸಿಲ್ವ, ಪ್ರವೀಣ್ ಮಸ್ಕರೇನ್ಹಸ್, ಜೇಮ್ಸ್ ಡೇನಿಸ್ ಡಿ'ಸೋಜ, ಸಾಯಿರಾಜ್ ಕಿದಿಯೂರು, ಸುಧಾಕರ್ ಪೂಜಾರಿ, ಅರುಣ್ ಡಿ'ಸೋಜ, ಸಂಜಯ್ ಆಚಾರ್ಯ, ಸುದೇಶ್ ಭಂಡಾರಿ, ಕಿರಣ್  ಉಪಸ್ಥಿತರಿದ್ದರು.